A-   A   A+

 
 
 
 
 
 
 
 
 
 
 
 
 
 
 
img  
img
   
 
 ಟಿಕೇಟ್ ಕಚೇರಿಗಳು
ಪ್ರಯಾಣಿಕರಿಗೆ ಟಿಕೇಟುಗಳನ್ನು ವಿತರಿಸಲು (ಚೀಟಿಗಳು ಮತ್ತು ಸ್ಮಾರ್ಟ್‍ಕಾರ್ಡುಗಳು) ಟಿಕೇಟ್ ಕಚೇರಿ ಯಂತ್ರಗಳೊಂದಿಗೆ (ಟಿಒಎಂ) ಟಿಕೇಟ್ ಕಚೇರಿಗಳು ಅಥವಾ ಕೌಂಟರುಗಳನ್ನು ಸಜ್ಜುಗೊಳಿಸಲಾಗಿರುತ್ತದೆ. ಈ ಕೌಂಟರುಗಳಲ್ಲಿ ಮೌಲ್ಯ ಅಥವಾ ಪ್ರಯಾಣಗಳನ್ನು ಸಹ ಸ್ಮಾರ್ಟ್‍ಕಾರ್ಡುಗಳಿಗೆ ಮರುಭರ್ತಿ ಮಾಡಬಹುದು.

   
 
 ಟಿಕೇಟ್ ಮಾರಾಟ ಯಂತ್ರ
ಪ್ರಯಾಣಿಕರಿಗೆ ಟೋಕನ್‍ಗಳನ್ನು ಖರೀದಿಸಿ ನಗದಿನ ಮೂಲಕ ತಮ್ಮ ಸ್ಮಾರ್ಟ್‍ಕಾರ್ಡುಗಳಿಗೆ ಮೌಲ್ಯವನ್ನು ತುಂಬಲು ಸಾಧ್ಯವಾಗುವಂತೆ ಎಂ.ಜಿ. ರಸ್ತೆ, ಇಂದಿರಾ ನಗರ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಟಿಕೇಟ್ ಮಾರಾಟ ಯಂತ್ರಗಳನ್ನು ಅಳವಡಿಸಲಾಗಿದೆ.

   
 
 ಆರ್‍ವಿಸಿಟಿ
ಹಿಂದಿನ ವ್ಯವಹಾರಗಳನ್ನು ಪರೀಕ್ಷಿಸಿಕೊಳ್ಳಲು ಸಾಧ್ಯವಾಗುವಂತೆ ಉಳಿಕೆ ಮೌಲ್ಯ ಪರೀಕ್ಷಣಾ ಸಾಧನವನ್ನು (ಆರ್‍ವಿಸಿಟಿ) ಗ್ರಾಹಕ ಸೇವಾ ಕೇಂದ್ರದ ಬಳಿ ಅಳವಡಿಸಲಾಗಿದೆ.

   
 
ಗ್ರಾಹಕ ಸೇವಾ ಕೇಂದ್ರ/ಕೌಂಟರುಗಳು
ಪ್ರಯಾಣಿಕರು ತಮ್ಮ ಟಿಕೇಟುಗಳ ಬಗೆಗಿನ ಯಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯ ಪಡೆಯಲು ನಿಲ್ದಾಣಗಳಲ್ಲಿ ಗ್ರಾಹಕ ಸೇವಾ ಕೆಂದ್ರ/ಕೌಂಟರುಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಆಗಮನ ಮತ್ತು ನಿರ್ಗಮನ ದ್ವಾರಗಳ ನಡುವೆ ಸ್ಥಾಪಿಸಲಾಗಿದ್ದು, ಸಂದಾಯಿತ ಮತ್ತು ಸಂದಾಯರಹಿತ ಪ್ರದೇಶಗಳೆರಡರಿಂದಲೂ ಪ್ರವೇಶಿಸಬಹುದಾಗಿದೆ. ಹೆಚ್ಚಿನ ದರಗಳನ್ನು ಸಂದಾಯ ಮಾಡುವ ಅಗತ್ಯವಿರುವಂಥವರು ಅಥವಾ ಸರಿಯಾಗಿ ಕೆಲಸ ಮಾಡದಿರುವ ಟಿಕೇಟುಗಳಿಗೆ ಸಂಬಂಧಿಸಿದಂತೆ ಸಹಾಯ ಪಡೆಯಬಯಸುವವರು ಸಹ ನಿಲ್ದಾಣಗಳಲ್ಲಿನ ಗ್ರಾಹಕ ಸೇವಾ ಕೌಂಟರು/ಕೇಂದ್ರಗಳಿಗೆ ಭೇಟಿ ನೀಡಬಹುದು.

   
 
ಪ್ರಯಾಣಿಕರ ಮಾಹಿತಿ ಪ್ರದರ್ಶನ ಫಲಕಗಳು
ಪ್ರಯಾಣಿಕರ ಮಾಹಿತಿ ಪ್ರದರ್ಶನ ಫಲಕಗಳನ್ನು, ಸ್ವಯಂಚಾಲಿತ ದ್ವಾರಗಳು ಮತ್ತು ಪ್ಲಾಟ್‍ಫಾರ್ಮ್ ಬಳಿ ರೈಲುಗಳ ಆಗಮನದ ಬಗ್ಗೆ ಪ್ರಯಾಣಿಕರಿಗೆ ವಾಸ್ತವವಾದ ಸಮಯದ ಮಾಹಿತಿ ಒದಗಿಸಲು ಅಳವಡಿಸಲಾಗಿದೆ.

 

 
img img img
imgimg img img img img