A-   A   A+

 
 
 
 
 
 
 
 
 
 
 
 
 
 
 
img  
img
 


● ಇದನ್ನು ಬಹುವಿಧವಾದ ಪ್ರಯಾಣಗಳನ್ನು ಕೈಗೊಳ್ಳಲು ಬಳಸಬಹುದಾಗಿದೆ ಮತ್ತು ಇದನ್ನು ನಿಯತ ಪ್ರಯಾಣಿಕರು ಎರಡು ನಿಗದಿತ ನಿಲ್ದಾಣಗಳ ನಡುವೆ ಪ್ರಯಾಣಿಸಲು ವಿಶೇಷವಾಗಿ ರೂಪಿಸಲಾಗಿದೆ.
● ಒಂದು ನಿಲ್ದಾಣದಿಂದ ತಲುಪಬೇಕಾದ ನಿಲ್ದಾಣಕ್ಕೆ ಕೈಗೊಳ್ಳುವ ಏಕ ಪ್ರಯಾಣವೇ ಒಂದು ಸಂಚಾರ.
● ದರ ವಲಯದೊಳಗಿನ ಪ್ರಯಾಣಕ್ಕಾಗಿ ಕಾರ್ಡಿನೊಳಗೆ ಸಂಚಾರಗಳ ಗುಚ್ಚವನ್ನು ಎಂದರೆ 10, 40, 50 ಅಥವಾ 100 ಸಂಚಾರಗಳ ಗುಚ್ಚವನ್ನು ಲೋಡ್ ಮಾಡಬಹುದಾಗಿದೆ.
● ಸಂಚಾರ್ ದರದಲ್ಲಿ ವಾರ್ಷಿಕ ದರದ ಶೇಕಡ 10ರವರೆಗೆ ರಿಯಾಯಿತಿ ನೀಡಲಾಗುತ್ತದೆ.
● ಸಂಚಾರ್ ಟಿಕೇಟ್‍ಗಳಲ್ಲಿ ವಾರ್ಷಿಕ ಟಿಕೇಟನ್ನು ಸಹ ಲೋಡ್ ಮಾಡಬಹುದಾಗಿದ್ದು, ಅಂಥ ಸಂದರ್ಭಗಳಲ್ಲಿ ಪ್ರಯಾಣದ ಅವಧಿಯಲ್ಲಿ ವಿಧಿಸಬಹುದಾದ ದರವು ಎರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ ಅದಾಗಿರುತ್ತದೆ.


ಸಂಚಾರ ಟಿಕೇಟ್‍ಗಾಗಿ (ಸಂಚಾರ್) ನಿಯಮಗಳು:

● ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಲಭ್ಯವಿರುವ ಬೇಪಾವತಿ ಸಂಗ್ರಹಿತ ಮೌಲ್ಯ ಟಿಕೇಟಿನ ಜೊತೆಗೆ, ಸಂಚಾರ ಟಿಕೇಟ್‍ಅನ್ನು (ಸಂಚಾರ್) ಸಹ ಈ ಕಾರ್ಡುಗಳಲ್ಲಿ ಲೋಡ್ ಮಾಡಬಹುದು. ಕಾರ್ಡನ್ನು ನಂತರ ಬಹುವಿಧವಾದಟಿಕೇಟ್‍ಅನ್ನು ಒಳಗೊಂಡಿರುವ ಟಿಕೇಟ್ ಎಂದು ಪರಿಗಣಿಸಲಾಗುತ್ತದೆ. ಪ್ರಯಾಣ ಕೈಗೊಳ್ಳುವ ಅವಧಿಯಲ್ಲಿ, ಪ್ರಯಾಣಿಕನಿಗೆ ಪ್ರಯೋಜನಕಾರಿಯಾಗುವ ಟಿಕೇಟನ್ನು ದ್ವಾರಗಳಲ್ಲಿ ಬಳಸಲಾಗುತ್ತದೆ.


● ಸಂಚಾರ ಟಿಕೇಟ್, ಗೊತ್ತುಪಡಿಸಿದ ಸಂಖ್ಯೆಯ ನಿಲ್ದಾಣಗಳವರೆಗೆ (ದರ ವಲಯಗಳು) ಸಾಕಷ್ಟು ಸಂಖ್ಯೆಯ ಸಂಚಾರಗಳನ್ನು ಕೈಗೊಳ್ಳಲು ಅನುಮತಿ ನೀಡುತ್ತದೆ ಮತ್ತು ಗೊತ್ತುಪಡಿಸಿದ ಅವಧಿಯವರೆಗೆ ಸಿಂಧುವಾಗಿರುತ್ತದೆ. ಎರಡು ನಿಗದಿತ ಸ್ಥಳಗಳ ನಡುವೆ. ಎಂದರೆ ಮನೆಯಿಂದ ಕಾರ್ಯಸ್ಥಳದವರೆಗೆ ನಿಯತವಾಗಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಇವು ಪ್ರಯೋಜನಕಾರಿಯಾಗಿವೆ.

● ಈ ಕೆಳಗೆ ಲಭ್ಯವಿರುವ ಸಂಚಾರ ಟಿಕೇಟುಗಳ ಬಗೆಗಳ ಪೈಕಿ ಯಾವುದೇ ಸಂಚಾರಗಳ ಗುಚ್ಚವನ್ನು ಪ್ರಯಾಣಿಕನು ಖರೀದಿಸಬಹುದು:
            ● 10 ಸಂಚಾರಗಳ ಟಿಕೇಟ್ (ಸಂಚಾರ10): 10 ಸಂಚಾರಗಳಿಗೆ ಅನುಮತಿ: 1 ತಿಂಗಳ ಕಾಲ ಸಿಂಧುವಾಗಿರುತ್ತದೆ.

            ● 40 ಸಂಚಾರಗಳ ಟಿಕೇಟ್ (ಸಂಚಾರ40): 40 ಸಂಚಾರಗಳಿಗೆ ಅನುಮತಿ: 3 ತಿಂಗಳುಗಳ ಕಾಲ ಸಿಂಧುವಾಗಿರುತ್ತದೆ.

            ● 50 ಸಂಚಾರಗಳ ಟಿಕೇಟ್ (ಸಂಚಾರ50): 50 ಸಂಚಾರಗಳಿಗೆ ಅನುಮತಿ: 50 ತಿಂಗಳುಗಳ ಕಾಲ ಸಿಂಧುವಾಗಿರುತ್ತದೆ.

            ● 100 ಸಂಚಾರಗಳ ಟಿಕೇಟ್ (ಸಂಚಾರ100): 100 ಸಂಚಾರಗಳಿಗೆ ಅನುಮತಿ: 6 ತಿಂಗಳುಗಳ ಕಾಲ ಸಿಂಧುವಾಗಿರುತ್ತದೆ.


● ಸ್ಮಾರ್ಟ್‍ಕಾರ್ಡಿನಲ್ಲಿ ಕೋರಲಾಗುವ ಸಂಚಾರಗಳ ಸಂಖ್ಯೆಯನ್ನು ತುಂಬಲಾಗುತ್ತದೆ ಮತ್ತು ಕಾರ್ಡಿನಲ್ಲಿರುವ ಟ್ರಿಪ್ ಕೌಂಟರನ್ನು ಈ ಮೌಲ್ಯಕ್ಕೆ ಸರಿಹೊಂದಿಸಲಾಗುತ್ತದೆ. ಈ ಟ್ರಿಪ್ ಕೌಂಟರನ್ನು, ಸಂದಾಯಿತ ಪ್ರದೇಶದಿಂದ ಪ್ರಯಾಣಿಕನು ನಿರ್ಗಮಿಸಿದಾಗ ಕಡಿಮೆಗೊಳಿಸಲಾಗುತ್ತದೆ.

● ಸಂಚಾರ ಸಿಂಧುತ್ವ: ಸಂಚಾರ ಟಿಕೇಟ್, ಸಂಚಾರ ಯಾವ ನಿಲ್ದಾಣದಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿಯೊಂದು ಸಂಚಾರಕ್ಕಾಗಿ ಖರೀದಿಸಿದ ನಿಲ್ದಾಣಗಳವರೆಗೆ (ದರ ವಲಯಗಳು) ಮತ್ತು ಅವುಗಳನ್ನು ಒಳಗೊಂಡು ಎಲ್ಲ ಸಂಚಾರಗಳಿಗೆ ಸಿಂಧುವಾಗಿರುತ್ತದೆ.

● ಅವಧಿ ಮೀರಿ ಉಳಿಯುವುದಕ್ಕೆ ಸಂಬಂಧಿಸಿದ ನಿಯಮ: ಸಿಂಧುವಾದ ಟಿಕೇಟನ್ನು ಹೊಂದಿರುವ ಪ್ರಯಾಣಿಕನು ಅದೇ ನಿಲ್ದಾಣದಿಂದ 20 ನಿಮಿಷಗಳ ಮತ್ತು ಇತರ ನಿಲ್ದಾಣಗಳಿಂದ 120 ನಿಮಿಷಗಳ ಒಳಗಾಗಿ ನಿರ್ಗಮಿಸಬೇಕು. ಈ ಕಾಲಮಿತಿ ಮೀರಿ ನಮ್ಮ ಮೆಟ್ರೋದ ಸಂದಾಯಿತ ಪ್ರದೇಶದಲ್ಲಿ ಉಳಿದದ್ದಕ್ಕಾಗಿ 50.00 ರೂ.ಗಳ ಗರಿಷ್ಟ ಮೊತ್ತಕ್ಕೆ ಒಳಪಟ್ಟು ಪ್ರತಿ ಗಂಟೆಗೆ 10.00 ರೂ.ಗಳಂತೆ ದಂಡವನ್ನು ವಿಧಿಸಲಾಗುತ್ತದೆ.

● ಸಿಂಧುತ್ವದ ಅವಧಿ: ಸಂಚಾರ್ ಟಿಕೇಟುಗಳಿಗಾಗಿ ಸಿಂಧುತ್ವದ ಅವಧಿಯು ಪ್ರತಿಯೊಂದು ವಿಧದ ಸಂಚಾರ ಟಿಕೇಟ್‍ಗೆ ಪರಿಭಾಷಿಸಿದಂತೆ ಅನ್ವಯವಾಗುತ್ತದೆ. ಟಿಕೇಟ್ ಸಿಂಧುತ್ವದ ಅವಧಿಯ ಕೊನೆಯಲ್ಲಿ ಬಳಸದೆ ಉಳಿದ ಸಂಚಾರಗಳು ಸಿಂಧುತ್ವದ ಅವಧಿ ಕೊನೆಗೊಳ್ಳುವ ಮೊದಲು ಮುಂದಿನ ಸಂಚಾರಗಳನ್ನು ತುಂಬಿದ ಹೊರತು ರದ್ದಾಗುತ್ತವೆ.

● ಸಂಚಾರ ಟಿಕೇಟಿನ ಮರುಭರ್ತಿ (ರಿಲೋಡ್): ಸ್ಮಾರ್ಟ್‍ಕಾರ್ಡಿನಲ್ಲಿ ಚಾಲ್ತಿಯಲ್ಲಿರುವ ಸಂಚಾರ ಟಿಕೇಟ್ ಇದ್ದಲ್ಲಿ, ಆ ಕಾರ್ಡಿನಲ್ಲಿ ಅದೇ ಸಂಖ್ಯೆಯ ಸಂಚಾರ ನಿಲ್ದಾಣಗಳನ್ನು (ದರ ವಲಯ) ಮಾತ್ರ ಮರುಭರ್ತಿ ಮಾಡಬಹುದಾಗಿದೆ. ಯಾವುದೇ ಉಳಿಕೆ ಹಳೆಯ ಸಂಚಾರಗಳಿದ್ದರೆ ಅವುಗಳನ್ನು ಹೊಸ ಸಂಚಾರಗಳಿಗೆ ಸೇರಿಸತಕ್ಕದ್ದು. ಉದಾಹರಣೆಗೆ, ಪ್ರಯಾಣಿಕನು ಉಳಿದ 2 ಸಂಚಾರ ಟಿಕೇಟುಗಳೊಂದಿಗೆ (ಈಗಾಗಲೇ 8 ಸಂಚಾರಗಳನ್ನು ಬಳಸಲಾಗಿರುತ್ತದೆ) 10 ಸಂಚಾರ ಟಿಕೇಟುಗಳನ್ನು ಮರುಭರ್ತಿ ಮಾಡಲು ಬಯಸಿದರೆ, ಹೊಸ 10 ಸಂಚಾರ ಟಿಕೇಟಿನ ದರ ಮೌಲ್ಯವು ಹಳೆಯ ಸಂಚಾರ ಸಂಖ್ಯೆಯದ್ದೇ ಆಗಿರುತ್ತದೆ, ಎಂದರೆ 80.00 ರೂ.ಗಳಾಗಿರುತ್ತದೆ. ಈ ಸಂದರ್ಭದಲ್ಲಿ, ಪ್ರಯಾಣಿಕನು 80.00 ರೂ.ಗಳನ್ನು ನೀಡಬೇಕು ಮತ್ತು 10 ಸಂಚಾರಗಳನ್ನು ಕಾರ್ಡಿನಲ್ಲಿ ಮರುಭರ್ತಿ ಮಾಡಲಾಗುತ್ತದೆ, ಇದು ಕಾರ್ಡಿನಲ್ಲಿನ ಒಟ್ಟು ಸಂಚಾರ ಸಂಖ್ಯೆಗಳನ್ನು 12ಕ್ಕೆ (10 ಹೊಸ ಮತ್ತು 2 ಹಳೆಯ) ಸಮನಾಗಿಸುತ್ತದೆ. ಹಳೆಯ ಸಂಚಾರಗಳು ಹೊಸ ಸಂಚಾರಗಳಿಗೆ ಇರುವಂತಹುದೇ ಸಿಂಧುತ್ವವನ್ನು ಹೊಂದಿರುತ್ತದೆ. ಪ್ರಯಾಣಿಕನು ಬೇರೆ ನಿಲ್ದಾಣಗಳ (ದರ ವಲಯ) ಸಂಚಾರ ಬಯಸಿದ್ದಲ್ಲಿ, ಆತನು ಈಗಿರುವ ಟಿಕೇಟನ್ನು ಹಿಂದಿರುಗಿಸಿ ಹೊಸ ಸಂಚಾರ ಟಿಕೇಟನ್ನು ಭರ್ತಿ ಮಾಡಿಸಿಕೊಳ್ಳಬೇಕು.

● ಅದೇ ನಿಲ್ದಾಣದಿಂದ ನಿರ್ಗಮನ: ಸಂಚಾರ ಟಿಕೇಟನ್ನು ಹೊಂದಿರುವ ಪ್ರಯಾಣಿಕನು, ಅದೇ ನಿಲ್ದಾಣದಿಂದ ನಿರ್ಗಮಿಸಿದರೆ ಆತನು ತನ್ನ ಒಂದು ಸಂಚಾರವನ್ನು ಕಡಿಮೆಗೊಳಿಸಿಕೊಳ್ಳುವನು. ಸಂದಾಯಿತ ಪ್ರದೇಶವನ್ನು ಪ್ರವೇಶಿಸಿದ ನಂತರ, ನಿರ್ದಿಷ್ಟಪಡಿಸಿದ ಕಾಲಮಿತಿಯೊಳಗೆ, ಆತನು ಪ್ರಯಾಣ ಕೈಗೊಳ್ಳದೆ ನಿಲ್ದಾಣದಿಂದ ನಿರ್ಗಮನವನ್ನು ಆಯ್ಕೆ ಮಾಡಿಕೊಂಡರೆ, ಪ್ರತಿಯಾಗಿ ಆತನು ಗ್ರಾಹಕ ಸೇವಾ ಕೇಂದ್ರ (ಕಸ್ಟಮರ್ ಕೇರ್ ಸೆಂಟರ್)ವನ್ನು ಸಂಪರ್ಕಿಸಬೇಕು. ಕನಿಷ್ಠ ದರವನ್ನು ನಗದು ಮೂಲಕ ಸಂದಾಯ ಮಾಡಿದ ನಂತರ, ಸಂಚಾರ ಕೌಂಟರನ್ನು ಕಡಿಮೆಗೊಳಿಸಲಾಗುವುದಿಲ್ಲ ಮತ್ತು ಸಂಚಾರ ಟಿಕೇಟನ್ನು ನಿರ್ಗಮಿಸಲು ಅನುಮತಿಸಲು ಸರಿಹೊಂದಿಸಲಾಗುತ್ತದೆ. ಅವಧಿ ಮೀರಿ ಉಳಿದ ಸಂದರ್ಭದಲ್ಲಿ, ಸಂಚಾರ ಸಂಖ್ಯೆಯ ಎಣಿಕೆಯನ್ನು ಕಡಿಮೆಗೊಳಿಸುವುದಿಲ್ಲ. ಆದರೆ, ಕನಿಷ್ಠ ದರ ಮತ್ತು ದಂಡವನ್ನು ನಗದು ಮೂಲಕ ಸ್ವೀಕರಿಸಲಾಗುತ್ತದೆ.

 

 
 
       
img img img
imgimg img img img img img img img