A-   A   A+

 
 
 
 
 
 
 
 
 
 
 
 
 
 
 
img  
img
 


•● ಬಹುವಿಧವಾದ ಪ್ರಯಾಣಗಳನ್ನು ಕೈಗೊಳ್ಳುವುದಕ್ಕಾಗಿ ಇವುಗಳನ್ನು ಬಳಸಲಾಗುತ್ತದೆ.
•● ಬಳಕೆದಾರನು 50.00 ರೂ.ಗಳ ಅಪವತ್ರ್ಯಗಳಲ್ಲಿ ಕಾರ್ಡಿನಲ್ಲಿ ಗರಿಷ್ಟ 1500 ರೂ.ಗಳವರೆಗೆ ಹಣವನ್ನು ಲೋಡ್ ಮಾಡಿಸಬಹುದು.
•● ಟಿಕೇಟಿನಲ್ಲಿನ ಸಂಗ್ರಹಿತ ಮೌಲ್ಯವು ಮಾಡಲಾದ ಪ್ರಯಾಣಗಳ ವ್ಯಾಪ್ತಿಗನುಗುಣವಾಗಿ ಕಡಿಮೆಯಾಗುತ್ತದೆ.
●• ವಾರ್ಷಿಕ ದರದಲ್ಲಿ ಟೋಕನ್ ದರದ ಶೇಕಡ 15ರವರೆಗೆ ರಿಯಾಯಿತಿ ನೀಡಲಾಗುತ್ತದೆ.


ಸಂಗ್ರಹಿತ ಮೌಲ್ಯ ಟಿಕೇಟಿಗಾಗಿ (ವಾರ್ಷಿಕ್) ನಿಯಮಗಳು:

ಪೂರ್ಣ ಹಣ ಭರ್ತಿ (ಟಾಪಿಂಗ್ ಅಪ್): ಯಾವುದೇ ಟಿಕೇಟ್ ಕಚೇರಿಗಳಲ್ಲಿ, ಎಟಿಎಂಗಳಲ್ಲಿ, ಬಿಎಂಆರ್‍ಸಿಎಲ್ ವೆಬ್‍ಸೈಟಿನಲ್ಲಿ, ಎಸ್‍ಬಿಐ ಅಂತರ್ಜಾಲದಲ್ಲಿ ಮತ್ತು ಮೋಬೈಲ್ ಬ್ಯಾಂಕಿಂಗ್ ಮೂಲಕ ಮತ್ತು ಏರ್‍ಟೆಲ್ ರಿಟೈಲ್ ಔಟ್‍ಲೆಟ್‍ಗಳಲ್ಲಿ ಕರೆನ್ಸಿ ಮೌಲ್ಯವನ್ನು ಸ್ಮಾರ್ಟ್‍ಕಾರ್ಡಿಗೆ ಸೇರಿಸಬಹುದು.

ಉಳಿಕೆ ಮೌಲ್ಯ: ಪ್ರತಿಯೊಂದು ಪ್ರಯಾಣದ ನಂತರ, ಕಾರ್ಡಿನಲ್ಲಿನ ಸಂಗ್ರಹಿತ ಮೌಲ್ಯವು ಕೈಗೊಳ್ಳಲಾದ ಪ್ರಯಾಣಕ್ಕೆ ನಿಗದಿಪಡಿಸಿದ ಮೊತ್ತದಿಂದ ಕಡಿಮೆಯಾಗತಕ್ಕದ್ದು. ಉಳಿದ ಮೊತ್ತವು ಕಾರ್ಡಿನಲ್ಲೇ ಇರುತ್ತದೆ..

ಸಂಗ್ರಹಿತ ಮೌಲ್ಯ ಟಿಕೇಟಿನ ಮೌಲ್ಯ ಸಂಖ್ಯೆ: ಸಂಗ್ರಹಿತ ಮೌಲ್ಯ ಟಿಕೇಟಿನ ಸಂದರ್ಭದಲ್ಲಿ ಟಾಪ್‍ಅಪ್ ಮೌಲ್ಯವು ಕನಿಷ್ಠ 50.00 ರೂ.ಗಳಾಗಿರತಕ್ಕದ್ದು ಮತ್ತು ನಂತರ ಅದು 50.00 ರೂ.ಗಳ ಅಪವತ್ರ್ಯಗಳಲ್ಲಿರತಕ್ಕದ್ದು. ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡಿನ ವೆಚ್ಚವು 50.00 ರೂ.ಗಳಾಗಿದ್ದು ಅದು ಸಂಗ್ರಹಿತ ಮೌಲ್ಯದಿಂದ ಬೇರೆಯದಾಗಿರುತ್ತದೆ.

ಒಟ್ಟು ಗರಿಷ್ಟ ಸಂಗ್ರಹಿತ ಮೌಲ್ಯ:: ಸಂಗ್ರಹಿತ ಮೌಲ್ಯ ಟಿಕೇಟಿನಲ್ಲಿನ (ಎಸ್‍ವಿಟಿ) ಒಟ್ಟು ಗರಿಷ್ಟ ಸಂಗ್ರಹಿತ ಮೌಲ್ಯವು 1500.00 ರೂ.ಗಳಾಗಿರುತ್ತದೆ. ನಿಲ್ದಾಣಗಳಲ್ಲಿರುವ ಔಟ್‍ಲೆಟ್‍ಗಳಿಗಿಂತ ಬೇರೆಯದಾದ ಔಟ್‍ಲೆಟ್‍ಗಳ ಮೂಲಕ ಎಂದರೆ ಎಸ್‍ಬಿಐ ಎಟಿಎಂ, ವೆಬ್‍ಸೈಟ್, ಏರ್‍ಟೆಲ್ ರಿಟೈಲರ್ಸ್ ಮೂಲಕ ಮಾಡಿಸುವ ಟಾಪ್ ಅಪ್ ಮೌಲ್ಯಕ್ಕಾಗಿ, ಒಂದು ಬಾರಿಗೆ ಗರಿಷ್ಟ ಮಿತಿ 1000.00 ರೂ.ಗಳಾಗಿರುತ್ತದೆ.

ಸಂಗ್ರಹಿತ ಮೌಲ್ಯ ಪ್ರಯಾಣ ರಿಯಾಯಿತಿ: ಸಂಗ್ರಹಿತ ಮೌಲ್ಯ ಟಿಕೇಟ್ ಬಳಕೆಗೆ ಉತ್ತೇಜನವಾಗಿ, ಸಂಗ್ರಹಿತ ಮೌಲ್ಯ ಟಿಕೇಟನ್ನು ಬಳಸಿದಾಗ ಕಡಿಮೆಗೊಳಿಸಿದ ದರವನ್ನು ವಿಧಿಸಲಾಗುತ್ತದೆ. ಇದು ಟೋಕನ್ ದರಗಳ ಮೇಲೆ ಶೇಕಡ 10ರಷ್ಟಿರುತ್ತದೆ..

ಅವಧಿ ಮೀರಿ ಉಳಿಯುವುದಕ್ಕೆ ಸಂಬಂಧಿಸಿದ ನಿಯಮಗಳು: ಸಿಂಧುವಾದ ಟಿಕೇಟನ್ನು ಹೊಂದಿರುವ ಪ್ರಯಾಣಿಕನು ಅದೇ ನಿಲ್ದಾಣದಿಂದ 20 ನಿಮಿಷಗಳ ಒಳಗಾಗಿ ಮತ್ತು ಇತರ ನಿಲ್ದಾಣಗಳಿಂದ 120 ನಿಮಿಷಗಳ ಒಳಗಾಗಿ ನಿರ್ಗಮಿಸಬಹುದಾಗಿದೆ. ಈ ಮಿತಿಗಳನ್ನು ಮೀರಿ ನಮ್ಮ ಮೆಟ್ರೋದ ಸಂದಾಯಿತ ಪ್ರದೇಶದಲ್ಲಿ ಉಳಿದುಕೊಳ್ಳುವುದಕ್ಕಾಗಿ, ಗರಿಷ್ಟ 50.00 ರೂ.ಗಳಿಗೆ ಒಳಪಟ್ಟು ಪ್ರತಿ ಗಂಟೆಗೆ 10.00 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ.

ಪ್ರಯಾಣಕ್ಕಾಗಿ ಸಂಗ್ರಹಿತ ಮೌಲ್ಯ ಟಿಕೇಟಿನಲ್ಲಿ ಇರಬೇಕಾದ ಕನಿಷ್ಠ ಬಾಕಿ: ಮೆಟ್ರೋದ ಕನಿಷ್ಠ ದರಕ್ಕೆ ಸಮಾನವಾದ ಸಂಗ್ರಹಿತ ಮೌಲ್ಯವನ್ನು ಸ್ಮಾರ್ಟ್‍ಕಾರ್ಡ್ ಹೊಂದಿದ್ದರೂ ಸಹ ಸಿಸ್ಟಂ ಒಳಗೆ ಪ್ರವೇಶಿಸಲು ಪ್ರಯಾಣಿಕನಿಗೆ ಅನುಮತಿಸಲಾಗುತ್ತದೆ. ಪ್ರಯಾಣವನ್ನು ಪೂರ್ಣಗೊಳಿಸಲು ಸಾಕಾಗುವಷ್ಟು ಬಾಕಿಯನ್ನು ತಾನು ಹೊಂದಿರುವೆನೆಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕನಿಗೆ ಸಲಹೆ ನೀಡಲಾಗುತ್ತದೆ. ಬಾಕಿ ಹಣವು ಲಭ್ಯವಿರದಿರುವ ದೂರಕ್ಕೆ ಪ್ರಯಾಣವನ್ನು ಮಾಡಿದ ಪಕ್ಷದಲ್ಲಿ, ದ್ವಾರಗಳ ಮೂಲಕ ನಿರ್ಗಮಿಸಲು ಸಾಧ್ಯವಾಗುವಂತೆ ಗ್ರಾಹಕ ಸೇವಾ ಕೇಂದ್ರ (ಕಸ್ಟಮರ್ ಕೇರ್)ದಲ್ಲಿ ಕಾರ್ಡ್‍ಗೆ ಹಣ ತುಂಬಿಸಿಕೊಳ್ಳಬಹುದಾಗಿದೆ.

ವಿಧಿಸಲಾಗುವ ಕನಿಷ್ಠ ದರ: ಸಂಗ್ರಹಿತ ಮೌಲ್ಯ ಟಿಕೇಟನ್ನು ಹೊಂದಿರುವ ಪ್ರಯಾಣಿಕನಿಗೆ ಅದೇ ನಿಲ್ದಾಣದಿಂದ ನಿರ್ಗಮಿಸಲು (ಅಧಿಕ ಅವಧಿಗೆ ಉಳಿದುಕೊಳ್ಳದಿದ್ದರೆ) ಕನಿಷ್ಠ ದರವನ್ನು ವಿಧಿಸಲಾಗುತ್ತದೆ.

ಎಲ್ಲ ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಬೇಪಾವತಿ ಟಿಕೇಟ್: ಸಂಗ್ರಹಿತ ಮೌಲ್ಯ ಟಿಕೇಟ್ ಇದು ಬಿಎಂಆರ್‍ಸಿಎಲ್ ಮಾರುವ ಎಲ್ಲ ಕಾಂಟ್ಯಾಕ್ಟ್‍ಲೆಸ್ ಸ್ಮಾರ್ಟ್‍ಕಾರ್ಡ್‍ಗಳಲ್ಲಿ ಲಭ್ಯವಿರುವ ಬೇಪಾವತಿ ಟಿಕೇಟ್ ಆಗಿದೆ.

 

 
 
       
img img img
imgimg img img img img