A-   A   A+

 
 
 
 
 
 
 
 
 
 
 
 

ನಮ್ಮ ಬಗ್ಗೆ

 
img
img
 


ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‍ಸಿಎಲ್) ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಒಂದು ಜಂಟಿ ಉದ್ಯಮವಾಗಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಒಂದು ವಿಶೇಷ ಉದ್ದೇಶ ವಾಹಕವಾಗಿದೆ.
img
ಬೆಂಗಳೂರು ಮೆಟ್ರೋಗೆ “ನಮ್ಮ ಮೆಟ್ರೋ’’ ಎಂದು ನಾಮಕರಣ ಮಾಡಿದ್ದು, ಇದು ಬೆಂಗಳೂರಿನ ಕ್ಷಿತಿಜದ ಸೌಂದರ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲದೆ, ಸುಖಕರ ಪ್ರಯಾಣಕ್ಕೆ ಸಹ ಪೂರಕವಾದದ್ದಾಗಿದೆ. ಇದರ ಜೊತೆಗೆ, ನಮ್ಮ ಮೆಟ್ರೋ ಇಂಗಾಲ ಉತ್ಸರ್ಜನಗಳ ತಗ್ಗುವಿಕೆಗೆ ಗಣನೀಯ ಕೊಡುಗೆ ನೀಡುತ್ತಿರುವುದರಿಂದ ಇದು ಬೆಂಗಳೂರು ನಗರಕ್ಕೆ ಒಂದು ಮುಖ್ಯ ಪರಿಸರ ಸ್ನೇಹಿ ಸೇರ್ಪಡೆಯೆನಿಸಿದೆ.

ಯೋಜನೆಯು, ಬೆಂಗಳೂರಿನ ಪೂರ್ವದಲ್ಲಿ ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಮೈಸೂರು ರಸ್ತೆ ಟರ್ಮಿನಲ್‍ನಲ್ಲಿ ಕೊನೆಗೊಳ್ಳುವ 18.10 ಕಿ.ಮೀ. ಉದ್ದದ ಪೂರ್ವಪಶ್ಚಿಮ ಕಾರಿಡಾರನ್ನು ಹಾಗೂ ಉತ್ತರದಲ್ಲಿ ನಾಗಸಂದ್ರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಪುಟ್ಟೇನಹಳ್ಳಿಯಲ್ಲಿ ಕೊನೆಗೊಳ್ಳುವ 24.20 ಕಿ.ಮೀ. ಉದ್ದದ ಉತ್ತರದಕ್ಷಣ ಕಾರಿಡಾರನ್ನು ಹೊಂದಿದೆ.

ರೀಚ್ 1ರ (ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ) ವಾಣಿಜ್ಯ ಕಾರ್ಯಾಚರಣೆಗಳು 20ನೇ ಅಕ್ಟೋಬರ್ 2011 ರಂದು ಪ್ರಾರಂಭವಾಗಿವೆ ಮತ್ತು ರೀಚ್ 3 (ನಾಗಸಂಧ್ರ ದಿಂದ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯ ವರೆಗೆ ಕಾರ್ಯನಿರ್ವಹಿಸುತ್ತಿದೆ.) ಯಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು 1ನೇ ಮಾರ್ಚ್ 2014 ರಿಂದ ಪ್ರಾರಂಭವಾಗಿವೆ.

ಇದು, ಇಡೀ ಭಾರತದಲ್ಲೇ ಸ್ಟ್ಯಾಂಡರ್ಡ್ ಗೇಜ್ ಮೇಲೆ 750ವಿ ಡಿಸಿ ಥರ್ಡ್ ರೈಲ್ ಸಹಿತ ಕಾರ್ಯನಿರ್ವಹಿಸುತ್ತಿರುವ ಪ್ರಪ್ರಥಮ ಮೆಟ್ರೋ ರೈಲು ಯೋಜನೆಯಾಗಿದೆ.

 
 
img img img
img imgimg img img img img img img img img img img