ರಂಗೋಲಿ ಮೆಟ್ರೋ ಕಲಾ ಕೇಂದ್ರ

ರಂಗೋಲಿ ಮೆಟ್ರೋ ಕಲಾ ಕೇಂದ್ರ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ರಂಗೋಲಿ ಮೆಟ್ರೋ ಕಲಾ ಕೇಂದ್ರವು ವೈವಿಧ್ಯಮಯ ಪ್ರದರ್ಶನ ಮತ್ತು ದೃಶ್ಯ ಕಲಾ ಕಾರ್ಯಕ್ರಮಗಳಿಗೆ ಪ್ರಮುಖ ವೇದಿಕೆಯನ್ನು ನೀಡುತ್ತದೆ. ಇದು ಸಾರ್ವಜನಿಕ ಸಾಂಸ್ಕೃತಿಕ ಪ್ರದೇಶವಾಗಿದ್ದು, ಮೇ 6, 2013 ರಂದು ತೆರೆಯಲಾಯಿತು. ಇದು ವಿಸ್ಮಯ, ಛಾಯಾ ಮತ್ತು ಬೆಳಕು ಎಂಬ ಮೂರು ಕಲಾ ಗ್ಯಾಲರಿಗಳನ್ನು ಒಳಗೊಂಡಿದ್ದು, ಸ್ಥಳೀಯ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ. ರಂಗಸ್ಥಳ (ಆಡಿಟೋರಿಯಂ)ವು ಸ್ಟ್ಯಾಂಡ್-ಅಪ್ ಕಾಮಿಡಿ, ಕವನ ವಾಚನ, ನೃತ್ಯ, ನಾಟಕ, ಪುಸ್ತಕ ಬಿಡುಗಡೆ, ಚರ್ಚಾಸ್ಪರ್ಧೆ, ಮುಂತಾದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಜೊತೆಗೆ ನಗರಪೇಟೆ ಪ್ರದೇಶವು ಕರಕುಶಲ ಮತ್ತು ಇತರ ಸರಕುಗಳಿಗೆ ಮಾರುಕಟ್ಟೆಯನ್ನು ನೀಡುತ್ತದೆ. ಚಿಲಿಪಿಲಿ ಪ್ರದೇಶದಲ್ಲಿ ಮಕ್ಕಳು ಆಟವಾಡಬಹುದಾಗಿದ್ದು, ಹಾವು ಮತ್ತು ಏಣಿ ಆಟವನ್ನು ಇದರೊಂದಿಗೆ ಆನಂದಿಸಬಹುದು. ಸಂದರ್ಶಕರು ಬಯಲು ಹೊರಾಂಗಣ ಪ್ರದೇಶದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮ, ಪ್ರದರ್ಶನಗಳನ್ನು ಆನಂದಿಸಬಹುದು ಅಥವಾ ತೆರೆದ ಸ್ಥಳಗಳಲ್ಲಿ ನೃತ್ಯ ಅಭ್ಯಾಸವನ್ನು ಮಾಡುವುದರೊಂದಿಗೆ ವೀಕ್ಷಿಸಬಹುದು. ಕಲಾ ಕೇಂದ್ರದ ಮೇಲ್ಭಾಗದಲ್ಲಿ ನಡೆದಾಡಲು ಹೂವಿನ ಹಾದಿ ಎಂಬ ದಾರಿಯಿದ್ದು, ಹೂವುಗಳಿಂದ ಅಲಂಕೃತಗೊಂಡಿದೆ ಮತ್ತು ದಣಿವನ್ನು ನೀಗಿಸುವ ನಡಿಗೆ ಪ್ರದೇಶವನ್ನು ಹೊಂದಿದೆ.

Email: rangoli@bmrc.co.in

Website: www.rangoli.co.in

Phone: +91 82778 95567

rangoli
ರೀಚಾರ್ಜ್

ಸ್ಮಾರ್ಟ್ ಕಾರ್ಡ್ ಟಾಪ್ ಅಪ್

ಈಗ ನೀವು 'ನಮ್ಮ ಮೆಟ್ರೋ', 'Paytm' ಮತ್ತು 'Amazon Pay' ಮೊಬೈಲ್ ಅಪ್ಲಿಕೇಶನ್ಗಳ ಮೂಲಕವೂ ನಿಮ್ಮ ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ಗಳನ್ನು ರೀಚಾರ್ಜ್ ಮಾಡಬಹುದು.

ಲಾಗಿನ್ ಸಮಯದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ದಯವಿಟ್ಟು ಬಿಎಂಆರ್ಸಿಎಲ್ ಸಹಾಯವಾಣಿ 1800 425 12345 ಅನ್ನು ಸಂಪರ್ಕಿಸಿ ಅಥವಾ travelhelp@bmrc.co.in.

app-img
shape4

Loading...